
ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ರವರ 119ನೇ ಜನ್ಮದಿನಾಚರಣೆಯ ಪ್ರಯುಕ್ತ ನಗರದ ಬಾಬುಜಗಜೀವನರಾಂ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು. ಬಾಬುಜೀವನ ರಾಂ ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮನಿ ಮತ್ತು ಡಾ.ಅಂಬೇಡ್ಕರ ಜಿಲ್ಲಾ ಜಯಂತೋತ್ಸವ ಸಮಿತಿ ಗೌರವಾಧ್ಯಕ್ಷ ದಶರಥ ಬಾಬು ಒಂಟಿ, ಸಮಿತಿ ಅಧ್ಯಕ್ಷ ಅಶೋಕ ಟಿ.ವೀರನಾಯಕ, ರಾಜೀವ ಜಾನೆ, ದಿನೇಶ ದೊಡ್ಡಮನಿ, ಸಂತೋಷ ಹಾದಿಮನಿ ಸೇರಿದಂತೆ ಹಲವರಿದ್ದರು.




















