ಕಲಬುರಗಿ: ನಗರದ ಇಂದಿರಾ ಸ್ಮಾರಕ ಭವನದಲ್ಲಿ ಮಹಾನಗರ ಪಾಲಿಕೆಯ ವಿಶೇಷ ಮುಂಗಡ 2026-27ನೇ ಸಾಲಿನ ಅಂದಾಜು ಆಯವ್ಯಯ ಬಜೆಟ್ ಅನುಮೋದನೆ ಸಭೆ ಮೇಯರ ವರ್ಷಾ ರಾಜೀವ ಜಾನೆ ಅಧ್ಯಕ್ಷತೆಯಲ್ಲಿ ಜರುಗಿತು. ಹಣಕಾಸು ಸಮಿತಿ ಸದಸ್ಯೆ ಅನುಪಮಾ ರಮೇಶ ಕಮಕನೂರ, ಉಪಮೇಯರ ತೃಪ್ತಿ ಲಾಖೆ, ಪಾಲಿಕೆಯ ಆಯುಕ್ತರಾದ ಅವಿನಾಶ ಜಾ.ಸಿಂಧೆ ಮತ್ತು ಪಾಲಿಕೆ ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.