ಕಲಬುರಗಿ: 118ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2026, ಗಣತಂತ್ರ ಉಳಿಸಿ, ಸಾರ್ವಭೌಮತೆಯನ್ನು ರಕ್ಷಿಸಿ, ಸಮಾನತೆಗಾಗಿ ಹೋರಾಡಿ, ಲಿಂಗತಾರತಮ್ಯವನ್ನು ವಿರೋಧಿಸಿ, ಜೀವನೋಪಾಯದ ಮೇಲಿನ ದಾಳಿಯನ್ನು ವಿರೋಧಿಸಿ, ಸಿಐಟಿಯು, ಕೆಪಿಆರ್‍ಎಸ್, ಎಐಎಡಬ್ಲ್ಯೂಯು, ಜೆಎಂಎಸ್, ಎಸ್‍ಎಫ್‍ಐ, ಡಿವೈಎಫ್‍ಐ ನೇತೃತ್ವದಲ್ಲಿ ಕಾರ್ಮಿಕ, ರೈತ, ಕೃಷಿ ಕೂಲಿಕಾರರ, ವಿದ್ಯಾರ್ಥಿ, ಯುವ, ಮಹಿಳೆಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಎಂ.ಬಿ.ಸಜ್ಜನ್, ಪದ್ಮಿನಿ ಕಿರಣಗಿ, ಲವಿತ್ರ ವಸ್ತ್ರದ, ಶಾಂತಾ ಘಂಟಿ, ಸುಜಾತಾ ವೈ, ಶಾಂತಾ ಸರಡಗಿ, ಮಲ್ಲಮ್ಮ ಕೂಡ್ಲಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.