
ಕಲಬುರಗಿ: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂದು ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರೂ ಆದ ಪ್ರಾಂಶುಪಾಲ ಡಾ|| ಭುರ್ಲಿ ಪ್ರಹ್ಲಾದರವರು ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಕೇದಾರ ದೀಕ್ಷಿತ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರಕಾಶ ಚವ್ಹಾಣ, ಉಪನ್ಯಾಸಕರು ಮಳೇಂದ್ರ ಹಿರೇಮಠ, ವೈಶಾಲಿ ದೇಶಪಾಂಡೆ, ದಿವ್ಯಾ ಪಟವಾರಿ, ಪ್ರಕಾಶ ಕಾಂತೀಕರ್, ಶಾಂತೇಶ್ ಹುಂಡೇಕಾರ್, ಹೃಷಿಕೇಶ ಜಹಗೀರದಾರ್, ಕುಂದನ್ ಪ್ರತಾಪ್, ವಸಂತ ಕುಲಕರ್ಣಿ, ಸತೀಶ ನಾಯಿಡು ಮತ್ತು ಸಿಬ್ಬಂದಿಬಳಗ ಉಪಸ್ಥಿತರಿದ್ದರು.




























