ಕಲಬುರಗಿ: ರಾಜ್ಯ ಸರಕಾರ ಶುಕ್ರವಾರ ಮಂಡಿಸಿದ ಬಜೆಟ್ ಕಾರ್ಪೋರೇಟ್ ಪರವಾಗಿದ್ದು,ಉದ್ಯೋಗಖಾತ್ರಿ ಮತ್ತು ಗ್ರಾಮಾಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ರಾಜ್ಯ ಸರಕಾರದ ಧೋರಣೆ ಖಂಡಿಸಿ ಇಂದು ಭಾರತ ಕಮ್ಯೂನಿಷ್ಟ್ ಪಕ್ಷ ( ಎಂ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಕೆ ನೀಲಾ, ಡಾ.ಮೀನಾಕ್ಷಿ ಬಾಳಿ,ಭೀಮಶೆಟ್ಟಿ ಯಂಪಳ್ಳಿ,ಸುಧಾಮ ಧನ್ನಿ,ಪಾಂಡುರಂಗ ಮಾವಿನಕರ್ ಅವರು ಸೇರಿದಂತೆ ಹಲವರು ಪಾಲ್ಗೊಂಡರು.