ಕಲಬುರಗಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಿದ್ಧತೆಗಳ ಕುರಿತು ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಇಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿ.ಪಂ.ಸಿಇಓ ಭವರ್ ಸಿಂಗ್ ಮೀನಾ, ಅಪರ ಆಯುಕ್ತ ಪಾಂಡವೆ ರಾಹುಲ್ ತುಕರಾಂ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ (ಆಡಳಿತ) ಶೆಂಕ್ರಮ್ಮ ಬಿ. ಡವಳಗಿ, ಕಲಬುರಗಿ ಡಯಟ್ (ಅಭಿವೃದ್ಧಿ)ಪ್ರಾಂಶುಪಾಲರಾದ ಬಸವರಾಜ ಶೆಟ್ಟಿ ಇದ್ದರು.