ಕಲಬುರಗಿ: ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಹಾಗೂ ತುಟ್ಟಿ ಭತ್ಯೆ ಹೆಚ್ಚಿಸಿ ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಹೆಚ್.ಎಸ್.ಪತಕಿ, ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ಪದ್ಮಾವತಿ ಪಾಟೀಲ, ಹಣಮಂತರಾಯ ಅಟ್ಟೂರ್, ಮಾನಪ್ಪ ಇಜೇರಿ, ಶಿವಲಿಂಗಮ್ಮ ಲೇಂಗಟಿಕರ್, ವಿಶಾಲ ನಂದೂರಕರ್, ಕಲ್ಯಾಣಿ ತುಕ್ಕಾಣಿ, ಶರಣಬಸು ಶಿರೂರಕರ್, ಯಶೋಧಾ ರಾಠೋಡ್, ಬಾಬು ಮಳ್ಳಿ, ಕೈಲಾಸ ವಾಡೇಕರ್, ಮಹೇಶ್ ರಾಠೋಡ್ ಸೇರಿದಂತೆ ವiತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.