
ನಗರದಲ್ಲಿ ನಡೆದ ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಪರಿವಾರದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ದಿವಾನಸಾಬ. ಡಿ. ನದಾಫ, ಉಪಾಧ್ಯಕ್ಷರಾಗಿ ಮೌಲಾಸಾಬ ನದಾಫ, ಕಾರ್ಯದರ್ಶಿಯಾಗಿ ದಾವಲಸಾಬ ಎಚ್. ನದಾಫ, ಖಜಾಂಚಿಯಾಗಿ ನಿರ್ಮಲಾ ಹಿರೇಮಠ ಪದಗ್ರಹಣ ಮಾಡಿದರು. ದಿನಕರ ಅಮೀನ ಉದ್ಘಾಟಿಸಿದರು. ಪಾಂಡುರಂಗ ತಲಬೈಲಕರ, ಜ್ಯೋತಿ ವೆಂಕಟೇಶ, ತಾರಾದೇವಿ ವಾಲಿ ಅತಿಥಿಗಳಾಗಿ ಆಗಮಿಸಿದ್ದರು.



























