
ಕಲಬುರಗಿ: ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ (ಎಐಟಿಯುಸಿ) ಜಿಲ್ಲಾ ಸಮಿತಿ ನೆತೃತ್ವದಲ್ಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಅಂಬೇಡ್ಕರ ಸೇವಾ ಕೇಂದ್ರಗಳನ್ನು ರದ್ದುಪಡಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಎಐಟಿಯುಸಿ ರಾಜ್ಯ ಮಂಡಳಿಯ ಕರೆಯ ಮೇರಿಗೆ ನಗರದಲ್ಲಿಂದು ಬೃಹತ ಪ್ರತಿಭಟನಾ ಧರಣಿ ಕೈಗೊಂಡು ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು. ಪ್ರಭದೇವ ಯಳಸಂಗಿ, ಎಚ್.ಎಸ್.ಪತಕಿ, ಹಣಮಂತರಾಯ ಅಟ್ಟೂರ, ಮಾನಪ್ಪಾ ಇಜೇರಿ, ಶಿವಲಿಂಗಮ್ಮ ಲೆಂಗಟಿಕರ್, ದತ್ತಾತ್ರೆಯ ಕಬಾಡೆ, ಜಗನ್ನಾಥ ಗುಡಂಗುರ್ತಿ ಸೇರಿದಂತೆ ಕಾರ್ಮಿಕರು ಭಾಗವಹಿಸಿದ್ದರು.
























