
ಕಲಬುರಗಿ: ಒಳಮೀಸಲಾತಿ ಉಪವರ್ಗಿಕರಣದಿಂದ ರೋಷ್ಟರ್ ಬಿಂದುವಿನಲ್ಲಿ ಆದ ಗೊಂದಲಗಳನ್ನು ಪರಿಹಾರವಾಗುವ ತನಕ ಹುದ್ದೆಗಳ ಭಿರ್ತಿ ಪ್ರಕ್ರಿಯೆ ಹಾಗೂ ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ತಡೆಹಿಡಿಯುವಂತೆ ಆಗ್ರಹಿಸಿ ಒಳಮೀಡಲಾತಿ ಬಲಗೈ ಹೋರಾಟ ಸಮಿತಿ ನೆತೃತ್ವದಲ್ಲಿ ಬೃಹತ ಪ್ರತಿಭಟನೆ ಕೈಗೊಳ್ಳಲಾಯಿತು. ವಿಠಲ ದೊಡ್ಡಮನಿ, ಅರ್ಜುನಭದ್ರೆ, ಮಲ್ಲಪ್ಪ ಹೊಸಮನಿ, ಹಣಮಂತ ಬೋಧನಕರ್, ಮಹಾದೇವ ಮೋಘಾ, ಸಂಪತಕುಮಾರ ವಳಕೇರಿ, ಎ.ಬಿ ಹೊಸಮನಿ, ಎಸ್.ಎಸ್.ತವಡೆ, ದಿಗಂಬರ ಬೆಳಮಗಿ, ಸಂತೋಷ ಮೇಲಿನಮನಿ, ಅಮೃತ ಸಾಗರ, ದೇವಿಂದ್ರ ಸಿನ್ನೂರ, ಜೈಶೀಮ ಸೇರಿದಂತೆ ಹಲವರು ಭಾಗವಹಿಸಿದ್ದರು.
























