ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿಂದು ಆಯೋಜಿಸಿದ್ದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿದರು. ಸಚಿವರಾದ ಶರಣಬಸಪ್ಪ ದರ್ಶನಾಪೂರ, ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಹೆಚ್‍ಕೆಇ ಸಂಸ್ಥೆ ಅಧ್ಯಕ್ಷ ಶಶೀಲ ಜಿ.ನಮೋಶಿ, ರಾಜಾ ಬಿ.ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಡಾ.ಕೈಲಾಸ ಬಿ.ಪಾಟೀಲ, ಅರುಣಕುಮಾರ ಪಾಟೀಲ, ಸುರೇಂದ್ರ ಪಾಲ್ ಸಿಂಗ್ ಸಲುಜಾ, ಡಾ.ಉಮೇಶ್ ಜಾಧವ್, ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಆರ್.ಪಾಟೀಲ ಸೇರಿದಂತೆ ಮತ್ತಿರರು ಇದ್ದರು.