
ಲಕ್ಷ್ಮೇಶ್ವರ ಪಟ್ಟಣದಲ್ಲಿ ತಾಲೂಕ ಪಂಚಾಯತಿಯ ರಸ್ತೆಗಳನ್ನು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ಲೋಕೇಶ್ ಸುತಾರ, ಶಂಕರಗೌಡ ಪಾಟೀಲ, ಅರುಣ್ ಮೆಕ್ಕಿ, ಜಾಹಿರ್ ಮೊಮಿನ್, ಗಣೇಶ ನೆಹರವಾಡೆ, ಹನುಮಂತ ದುತ್ತರಗಿ, ಕಿರಣ್ ನಾಗಲೋಟಿ, ಈರಣ್ಣ ಶಿಗ್ಲಿ, ವಿನಾಯಕ್ ಮರಾಠೆ, ಶಿವಾನಂದ ಗಜನೂರ, ಶರಣು ಗುಡಗೇರಿ, ಬಸವರಾಜ್ ಶಿರಬಡಗಿ, ಕುಮಾರ ಅಣ್ಣಿಗೇರಿ, ಚಂದ್ರು ಮುಳುಗುಂದ, ಶಿವರಾಜ್ ಚಿಂಚಲಿ, ರಾಜು ಮೆಕ್ಕಿ, ಈರಣ್ಣ ಮೆಣಸಿನಕಾಯಿ, ಗಂಗಾಧರ್ ಕರಜ ಕಣ್ಣವರ ಸೇರಿದಂತೆ ಅನೇಕರಿದ್ದರು.
























