
ಕಲಬುರಗಿ: ನಗರದ ಕೆಕೆಆರ್‍ಟಿಸಿ ಕೇಂದ್ರ ಕಚೇರಿಯಲ್ಲಿ ಇಂದು ಆಯೋಜಿಸಿದ ಕಾರ್ಯಕ್ರಮದಲ್ಲಿ, ಕರ್ತವ್ಯದಲ್ಲಿರುವಾಗ ನಿಧನ ಹೊಂದಿದ ಸಂಸ್ಥೆಯ ನೌಕರರ ಅವಲಂಬಿತರಿಗೆ ಆಂತರಿಕ ಗುಂಪು ವಿಮೆ ಯೋಜನೆಯಡಿ ಪರಿಹಾರದ ಚೆಕ್ ಅನ್ನು ಸಂಸ್ಥೆ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ವಿತರಣೆ ಮಾಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಬಿ. ಸುಶೀಲ ಅವರು ಸೇರಿದಂತೆ ಹಲವರಿದ್ದರು
























