ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಕಣ್ಣಿ ಮಾರ್ಕೆಟ್ ಮಾರ್ಗವಾಗಿ ಬಸ್ ಕಾರ್ಯಾಚರಣೆ ಮಾಡಲು ಹೊಸ ಗೇಟ್ ಉದ್ಘಾಟನೆ ಸಮಾರಂಭಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಎಂ.ವಾಯ.ಪಾಟೀಲ, ಮೇಯರ್ ವರ್ಷಾ ರಾಜೀವ್ ಜಾನೆ, ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರ್ವಾಳ್ ಚಾಲನೆ ನೀಡಿದರು. ಕ.ಕ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶುಶೀಲ, ಮುಖ್ಯ ಕಾಮಗಾರಿ ಅಭಿಯಂತರ ಚನ್ನಣ್ಣ ಬೊರಯ್ಯ, ಟಿ. ಆಯಾಜ್, ಸುನೀಲಕುಮಾರ ಚಂದರಗಿ, ಆಶ್ರಫ ಅಲಿ, ಶಾರದಾದೇವಿ, ಶಾಂತರೆಡ್ಡಿ, ಅಶೋಕಕುಮಾರ ದೊಡ್ಡಮನಿ, ಪ್ರೀತಿ ಕಾಳೆ, ಸೂರ್ಯಕಾಂತ ಸಿಂಗೆ ಇದ್ದರು.