
ಕಲಬುರಗಿ: ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಕ್ರಿಯಾ ಕಾರ್ಯಕ್ರಮದ ಕರೆಯ ಮೇರೆಗೆ ಇಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು) ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಲಾಯಿತು. ಎಂ.ಬಿ ಸಜ್ಜನ, ಮೊಹ್ಮದ ತಸ್ಮಿಲ ಅಹ್ಮದ, ಗೌರಮ್ಮ ಪಾಟೀಲ, ನಾಗಯ್ಯಸ್ವಾಮಿ, ಜಾಫರ ಬಿ, ಜಾವೇದ ಹುಸೇನ, ಶೇಖಮ್ಮ, ಸೈಯದ್ ಹುಸೇನ ಸೇರಿದಂತೆ ಹಲವರಿದ್ದರು.





















