ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ ಕ್ರಾಂತಿ) ನೆತೃತ್ವದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ಕೈಗೊಂಡು, ಕಳೆದ 2022-23ನೇ ಸಾಲಿನ ಘೂಳನೂರ-ಮೋಗನಿಟಗಾ ಬಾಕಿ 9.72 ಕೋಟಿ ರೂ.ಗಳ ಕಾಮಗಾರಿಯನ್ನು ಕೈಗೊಳ್ಳದೇ 2 ವರ್ಷಗಳ ವಿಳಂಬ ಮಾಡಿ ಸರ್ಕಾರಕ್ಕೆ ತಪ್ಪಾಗಿ ಮಾಹಿತಿ ನೀಡಿ ಅವ್ಯವಹಾರ ಮಾಡುವ ಹುನ್ನಾರ ಮಾಡಿರುವ ಇಲಾಖೆಯ ಎಇಇ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸುವಂತೆ ಆಗ್ರಹಿಸಿ ಬೇಡಿಕೆಯ ಮನವಿ ಪತ್ರವನ್ನು ಇಲಾಖೆಯ ಮುಖ್ಯಸ್ಥರ ಮುಖಾಂತರ ಸಚಿವರಾದ ಪ್ರೀಯಾಂಕ್ ಖರ್ಗೆ ಅವರಿ ಸಲ್ಲಿಸಲಾಯಿತು. ಸಂಗಮನಾಥ ಬಟಗೇರಿ, ಕುಪೇಂದ್ರ ಬಿಲ್ವಾಡ ಸೇರಿದಂತೆ ಹಲವರಿದ್ದರು