ಕಲಬುರಗಿ:ಎಪ್‍ಸ್ಟೀನ್ ಫೈಲ್ಸ್‍ಗಳಿಂದ ಹೊರಹೊಮ್ಮುತ್ತಿರುವ ಗಂಭೀರ ಮತ್ತು ಗೊಂದಲದ ಬಹಿರಂಗ ಪಡಿಸುವಿಕೆಗಳನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿ ಟಾಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ, ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ ವಿ.ಕಾಂಬಳೆ, ಶಿವಾನಂದ್ ಹೊನುಗುಂಟಿ, ಈರಣ್ಣ ಪಾಟೀಲ್, ಪರಶುರಾಮ್ ನಾಟಿಕಾರ್, ಗೌತಮ್ ಕರಿಕಲ್, ರಾಖಿಬ್, ತಂಜಿಲ್ ಫಾರಾಜ್, ಮೊಹಮ್ಮದ್ ಅಸ್ವಾನ್, ಟೈಗರ್ ವಿಗ್ನೇಶ್, ಅಸ್ಲಾಂ ಸಿಂದಗಿ, ಶರ್ಫುದ್ದಿನ್ ಮಿಸ್ಟ್ರಿ, ಪ್ರದೀಪ್ ದೊಣ್ಣೂರ್, ಕಾರ್ತಿಕ್ ಹೊಸಮನಿ, ಫಾರೂಕ್ ಪಟೇಲ್ ಮುದಬಾಳ್ಳ್, ಅನಸ ಪಟೇಲ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.