
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಜನಪದ ಲೋಕದಲ್ಲಿ ಏರ್ಪಡಿಸಿದ್ದ 2026ನೇ ಸಾಲಿನ ವಿದ್ಯಾರ್ಥಿ ಜನಪದ ಲೋಕೋತ್ಸವದಲ್ಲಿ ನಗರದ ಕಮ್ಮಗೊಂಡನ ಹಳ್ಳಿಯ ಪೂರ್ಣಪ್ರಜ್ಞಾ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರವರು, ಎನ್.ಬಿ.ಇ.ಟಿ. ಸಂಸ್ಥೆಯ ಕಾರ್ಯದರ್ಶಿ ಡಿ.ಎನ್. ಹರಿದಾಸ್ ಮತ್ತು ವಿದ್ಯಾರ್ಥಿಗಳ ತಂಡದವರು ಉಪಸ್ಥಿತರಿದ್ದರು.





















