
ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆಯ ನೂತನ ಬ್ಲಾಕ್‍ನಲ್ಲಿ ಸೂಪರ್ ಸ್ಪೇಷಾಲಿಟಿ ಸರ್ವಿಸಸ್, ಕಾರ್ಡಿಯಾಲಾಜಿ ಯುನಿಟ್ ವಿತ್ ಕ್ಯಾತ್‍ಲಾಬ್ ಸೇರಿದಂತೆ ವಿವಿಧ ಯೋಜನೆಗಳನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿದರು. ಹೆಚ್‍ಕೆಇ ಸಂಸ್ಥೆ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಡಾ.ಕೈಲಾಸ ಪಾಟೀಲ, ಡಾ.ಕಿರಣ್ ದೇಶಮುಖ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇದ್ದರು.























