ಬೆಂಗಳೂರು ನಗರ, ಆನೇಕಲ್ ತಾಲ್ಲೂಕು ತಿರುಪಾಳ್ಯ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಡವರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ಗಳನ್ನು ತ್ಯಾಗರಾಜನ್ ಅಲಿಯಾಸ್ ಕಣ್ಣನ್‌ರವರು ವಿತರಣೆ ಮಾಡಿದರು. ಎಲೆಕ್ಟ್ರಾನಿಕ್ ಸಿಟಿಯ ಡಿಸಿಪಿ ನಾರಾಯಣ್, ನಗರಸಭೆ ಸದಸ್ಯರುಗಳಾದ ಮಂಜುನಾಥ್ ರೆಡ್ಡಿ, ಕೃಷ್ಣಪ್ಪ, ರಾಮಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಬಾಬುರೆಡ್ಡಿ ಮತ್ತಿತರರು ಇದ್ದಾರೆ.