ಕಲಬುರಗಿ:ನಗರದ ಎಂ.ಜಿ.ರೋಡ್‍ನ ಬಡೇಪುರದ ಮನ್ಸಬದಾರ ಲೇಔಟ್‍ನಲ್ಲಿ ನಿರ್ಮಿಸಲಾಗಿರುವ ಅಲ್-ಬದರ್ ಮಲ್ಟಿಸ್ಪೇಷಾಲಿಟಿ ಮತ್ತು ಡೆಂಟಲ್ ಹಾಸ್ಪಿಟಲ್‍ನ್ನು ಹಜರತ್ ಖ್ವಾಜಾ ಬಂದಾನವಾಜ್ ದರ್ಗಾದ ಸಜ್ಜಾದೆ ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಉದ್ಘಾಟಿಸಿದರು. ಆಸ್ಪತ್ರೆಯ ಚೇರ್ಮನ್ ಡಾ.ಎಂ.ಎ.ಮುಜೀಬ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪೂರ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ, ಶಶೀಲ ನಮೋಶಿ, ಫರಾಜ್ ಉಲ್ ಇಸ್ಲಾಂ, ಚಂದು ಪಾಟೀಲ, ಟ್ರಸ್ಟಿಗಳಾದ ಎಂ.ಎ.ನಜೀಬ್, ಸೈಯದ್ ಸನಾವುಲ್ಲಾ, ಡಾ.ಸೈಯದ್ ಜಕಾವುಲ್ಲಾ, ಡಾ.ಅರ್ಷದ್ ಹುಸೇನ್, ಎಂ.ಅವiನ್ ಮುಜೀಬ್, ಖಲೀಲ್ ಮಸೂದ್ ಅಲಿ ಸೇರಿದಂತೆ ಮತ್ತಿತರರು ಇದ್ದರು.