ನಗರದ ಕೆಂಬುತ್ತಹಳ್ಳಿ ಆಶ್ರಯ ಯೋಜನೆಯ ಎಸ್.ಸಿ. ಸಿದ್ದಲಿಂಗಪ್ಪ ಬಡಾವಣೆಯಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೬೯ನೇ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕನ್ನಹಳ್ಳಿ ಕೃಷ್ಣಪ್ಪ, ಮುತ್ತನಲ್ಲೂರು ಕೃಷ್ಣಪ್ಪ, ಆಡುಗೋಡಿ ರತ್ನಮ್ಮ, ಜಯಪ್ಪ, ಉಮೇಶ್, ಉದಯ್ ಹಾಗೂ ಕೆ.ಜಿ.ಎಸ್. ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿದ್ದಲಿಂಗಪ್ಪ ಅವರು ಆಶ್ರಯ ಯೋಜನೆಗಾಗಿ ಸತತ ೨೦ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ.