Home ಕ್ರೈಂ ಸುದ್ದಿಗಳು 110 ಮೊಬೈಲುಗಳು ವಾರಸುದಾರರಿಗೆ ಹಸ್ತಾಂತರ : ಡಿಎಸ್ ಪಿ ಪ್ರಶಾಂತ ಮುನ್ನೊಳ್ಳಿ

110 ಮೊಬೈಲುಗಳು ವಾರಸುದಾರರಿಗೆ ಹಸ್ತಾಂತರ : ಡಿಎಸ್ ಪಿ ಪ್ರಶಾಂತ ಮುನ್ನೊಳ್ಳಿ

ಅಥಣಿ : ಮಾ.28:ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ಸಂದರ್ಭಗಳಲ್ಲಿ ತಕ್ಷಣ ಸಮೀಪದ ಪೆÇಲೀಸ್ ಠಾಣೆಗೆ ದೂರು ನೀಡಬೇಕು ಹಾಗೂ ಸಿಇಐಆರ್ ಪೆÇೀರ್ಟಲ್‍ನಲ್ಲಿ ನೋಂದಣಿ ಮಾಡಿಸಬೇಕು ತಮ್ಮ ಮೊಬೈಲ್ ಸಿಕ್ಕೆ ಸಿಗುತ್ತದೆ ಎಂದು ಅಥಣಿ ಡಿಎಸ್ ಪಿ ಪ್ರಶಾಂತ ಮುನ್ನೊಳ್ಳಿ ಹೇಳಿದರು.
ಅವರು ಇಲ್ಲಿನ ಪೆÇೀಲೀಸ್ ಸಮುದಾಯ ಭವನದಲ್ಲಿ ಅಥಣಿ ಉಪ ವಿಭಾಗದ ವ್ಯಾಪ್ತಿಯ ಪೆÇಲೀಸರು, ಸಿ.ಇ.ಐ.ಆರ್ (ಸೆಂಟ್ರಲ್ ಎಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೆÇೀರ್ಟಲ್ ಮೂಲಕ ಪತ್ತೆಹಚ್ಚಿದ 110 ಮೊಬೈಲ್ ಫೆÇೀನ್‍ಗಳನ್ನು ಶುಕ್ರವಾರ ವಾರಸುದಾರರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು. ಸಿ.ಇ.ಐ.ಆರ್ (ಸೆಂಟ್ರಲ್ ಎಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೆÇೀರ್ಟಲ್‍ನ ಸಹಾಯದಿಂದ ಕಳೆದುಹೋದ ಮೊಬೈಲ್‍ಗಳನ್ನು ಪತ್ತೆ ಹಚ್ಚಲಾಗಿದೆ. ಈ ಕಾರ್ಯಾಚರಣೆ ಮೂಲಕ ಕಳೆದುಹೋದ ಮೊಬೈಲ್‍ಗಳನ್ನು ಮರಳಿ ಪಡೆಯುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ನಿಮ್ಮ ಮೊಬೈಲ್ ಕಳೆದುಹೋದರೆ ಆತಂಕ ಬೇಡ, ತಕ್ಷಣ ಸಿಇಐಆರ್ ಪೆÇೀರ್ಟಲ್‍ನಲ್ಲಿ ದೂರು ದಾಖಲಿಸಿ
ಸಿಇಐಆರ್ ಪೆÇೀರ್ಟಲ್‍ನಲ್ಲಿ ದೂರು ದಾಖಲಿಸಿದರೆ, ಕಳೆದುಹೋದ ಮೊಬೈಲ್‍ಗಳಲ್ಲಿ ಬೇರೆ ಸಿಮ್ ಕಾರ್ಡ್ ಹಾಕಿದ ತಕ್ಷಣ ನಮಗೆ ಮಾಹಿತಿ ಲಭ್ಯವಾಗುತ್ತದೆ. ಸಾರ್ವಜನಿಕರು ಮೊಬೈಲ್ ಕಳೆದುಕೊಂಡಾಗ ನಿರ್ಲಕ್ಷ್ಯ ಮಾಡದೆ ಇಲಾಖೆಯ ಪೆÇೀರ್ಟಲ್‍ನಲ್ಲಿ ಮಾಹಿತಿ ಅಪ್‍ಡೇಟ್ ಮಾಡಬೇಕು” ಎಂದು ತಿಳಿಸಿದ ಅವರು ಸದರಿ ಕಾರ್ಯಾಚರಣೆಯು
ಜಿಲ್ಲಾ ಪೆÇಲೀಸ್ ಅಧೀಕ್ಷಕ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಅವರ ಮಾರ್ಗದರ್ಶನದಲ್ಲಿ ನಡೆದಿದೆ ಎಂದು ಹೇಳಿದರು.
ಅಥಣಿ ಉಪ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 110 ಮೊಬೈಲ್‍ಗಳು ಪತ್ತೆಯಾಗಿದ್ದು ಅದರಲ್ಲಿ – ಅಥಣಿ ಠಾಣೆ: 37. ಐಗಳಿ ಠಾಣೆ: 20. ಕಾಗವಾಡ ಠಾಣೆ: 20. ರಾಯಬಾಗ ಠಾಣೆ: 13. ಹಾರೂಗೇರಿ ಠಾಣೆ: 10. ಕುಡಚಿ ಠಾಣೆ:10 ಮೊಬೈಲುಗಳಿವೆ.
ಈ ಸಂದರ್ಭದಲ್ಲಿ ಅಥಣಿ ಸಿಪಿಐಗಳಾದ ಸಂತೋಷ ಹಳ್ಳೂರ, ಮಲ್ಲಿಕಾರ್ಜುನ ಡಪ್ಪಿನ, ಪಿಎಸ್‍ಐಗಳಾದ ಗಿರಮಲಪ್ಪ ಉಪ್ಪಾರ, ಮಲ್ಲಿಕಾರ್ಜುನ ತಳವಾರ. ಚಂದ್ರಶೇಖರ ಸಾಗನೂರ. ರಾಘವೇಂದ್ರ ಖೋತ, ರಮೇಶ ತೆಲಸಂಗ ಹಾಗೂ ಎಂ. ಏ. ಆಳಂದ ಉಪಸ್ಥಿತರಿದ್ದರು. ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಬ್ಬಂದಿಗಳಾದ ಜಮೀರ್ ಡಾಂಗೆ, ಎಸ್. ಏ. ಶೇಕ್, ಧರೇಪ್ಪ ಧರಿಗೌಡರ. ಅಣ್ಣಪ್ಪ ಹಡಪದ್, ಧಮೇರ್ಂದ್ರ ಶ್ಯಾನವಾಡ, ಸುಧಾಕರ ಸನದಿ ಸೇರಿದಂತೆ ಇಲಾಖೆಯ ಇತರ ಸಿಬ್ಬಂದಿಗಳು ಹಾಜರಿದ್ದರು.
ತಮ್ಮ ತಮ್ಮ ಮೊಬೈಲ್ ಫೆÇೀನ್‍ಗಳನ್ನು ಪೆÇಲೀಸ ಇಲಾಖೆಯವರು ಸುರಕ್ಷಿತವಾಗಿ ಮರಳಿಸಿದ್ದಕ್ಕೆ ವಾರಸುದಾರರು ಪೆÇಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಹರ್ಷ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು.