
ಅಫಜಲಪುರ,ಸೆ.27-ಸುಳ್ಳು ದಾಖಲೆಗಳನ್ನು ನೀಡಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದು, ಆತನ ಬಗ್ಗೆ ಮಾಹಿತಿ ದೊರೆತಲ್ಲಿ ಅಫಜಲಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಈ ವ್ಯಕ್ತಿ ಶ್ರೀಶೈಲ್ ತಂದೇ ಲಕ್ಷ್ಮಣ ನಿಂಬಾಳ ಸಾ:ಕುಲಾಲಿ ಅಂತ ಸುಳ್ಳು ಹೆಸರು ಮತ್ತು ದಾಖಲಾತಿಗಳನ್ನು ನೀಡಿದ್ದು, ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದ್ದು, ನ್ಯಾಯಾಲಯವು ಆತನ ಮೇಲೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಸದರಿ ವ್ಯಕ್ತಿಯು ಎಲ್ಲಿ ಆದರೂ ಕಂಡಲ್ಲಿ ಅಫಜಲಪುರ ಪೆÇಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.