
ಕಲಬುರಗಿ:ಬೋಧಿಸತ್ವ ಪೀಪಲ್ಸ್ ಡೆವಲಪ್‍ಮೆಂಟ್ ಟ್ರಸ್ಟ್ ಬೌದ್ಧ ಸಮ್ಮೇಳನ ಆಚರಣಾ ಸಮಿತಿವತಿಯಿಂದ ಬೌದ್ಧ ಸಮ್ಮೇಳನ ಮತ್ತು ವಿಚಾರ ಸಂಕಿರಣದ ಅಂಗವಾಗಿ ನಗರದ ಜಗತ್ ವೃತ್ತದಿಂದ ಡಾ.ಎಸ್ ಎಂ ಪಂಡಿತ ರಂಗಮಂದಿರದವರೆಗೆ ಧಮ್ಮಧ್ವಜ ಪಂಚಶೀಲ ದಮ್ಮಯಾತ್ರೆ ಜರುಗಿತು. ಪೂಜ್ಯ ಭಂತೆ ವಿನಾಚಾರ,ದಿಗಂಬರ ಬೆಳಮಗಿ,ಎ.ಬಿ ಹೊಸಮನಿ,ಸುರೇಶ ಹಾದಿಮನಿ,ದಿನೇಶ ದೊಡಮನಿ,ದಶರಥ ಬಾಬು ವಂಟಿ,ಎಸ್.ಎಸ್ ತಾವಡೆ, ಪ್ರಕಾಶ ಮೂಲಭಾರತಿ ಸೇರಿದಂತೆ ಹಲವಾರು ಬೌದ್ಧ ಅನುಯಾಯಿಗಳು ಪಾಲ್ಗೊಂಡರು.






























