ಕಲಬುರಗಿ: ಆಮ್ ಆದ್ಮಿ ಪಾರ್ಟಿ (ಎಎಪಿ) ಕಲಬುರಗಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಕೈಗೊಂಡು, ಐ ಲವ್ ಮೊಹ್ಮದ (ಸಅ) ಎಂದು ಕೂಗಿದ ಅಮಾಯಕ ಮುಸ್ಲೀಮರನ್ನು ಜೈಲಿಗೆ ಅಟ್ಟಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು, ರಾಜ್ಯದ ಪಿಎಫ್‍ಐ ಸಂಘಟನೆಯ ಶಾಹೀದ, ಏಜಾಜ ಸೇರಿದಂತೆ ಹಲವರು ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದು, ಯಾವುದೇ ಅಪರಾದ ಸಾಬೀತಾಗದಿದ್ದರೂ ಬೇಲ್ ಕೊಟ್ಟಿರುವುದಿಲ್ಲ. ಮುಸ್ಲೀಮರ ಮೇಲಿನ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು, ಮುಸ್ಲಿಂ ಸಮಾಜವನ್ನು ಅಪಮಾನಿಸುವ, ರಾಜ್ಯದಲ್ಲಿ ಶಾಂತಿಭಂಗವನ್ನುಂಟು ಮಾಡುವ ಕೋಮುವಾದಿ ನಾಯಕರ ಮೇಲೆ ಕ್ರಮ ಜರುಗಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಮುಖಂಡರಾದ ಸುಲೇಮಾನ ಅಲಿ ಸೇರಿದಂತೆ ಹಲವರು ಭಾಗವಹಿಸಿದ್ದರು.