
ಕಲಬುರಗಿ: ಕಲಬುರಗಿ ಗಣೇಶ ಮಹಾ ಮಂಡಳ ವತಿಯಿಂದ ನಗರದ ಚೌಕ್ ಪೊಲೀಸ್ ಠಾಣೆ ಎದರುಗಡೆ ಶನಿವಾರ ರಾತ್ರಿ ಆಯೋಜಿಸಿದ್ದ ಗಣೇಶ ಸಾರ್ವಜನಿಕ ವಿಸರ್ಜನೆ ಸಮಾರಂಭವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಮಹಾನಗರ ಪಾಲಿಕೆ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಉದ್ಘಾಟಿಸಿದರು. ಮಂಡಳಿ ಕಾರ್ಯಾಧ್ಯಕ್ಷ ಶಶೀಲ ಜಿ.ನಮೋಶಿ, ಅಧ್ಯಕ್ಷ ಬಾಬುರಾವ ಜಹಾಗೀರದಾರ, ಉಪಾಧ್ಯಕ್ಷ ರಾಘವೇಂದ್ರ ಮೈಲಾಪೂರ, ಪ್ರಧಾನ ಕಾರ್ಯದರ್ಶಿ ಅಣವೀರ ಕಾಳಗಿ, ಕಿರಣ್ ಚವ್ಹಾಣ್, ಸುಭಾಷ ಜಾಧವ್, ಸಿದ್ದರಾಮ ತಾಳಿಕೋಟಿ, ನಾಗಣ್ಣ ಸರಡಗಿ ಸೇರಿದಂತೆ ಮತ್ತಿತರರು ಇದ್ದರು.