
ಕಲಬುರಗಿ: ಮೈಸೂರು ದಸರಾ ಉದ್ಘಾಟನೆಗೆ ಸರಕಾರದಿಂದ ಭಾನು ಮುಷ್ತಾಕ್‍ರಿಗೆ ಆಹ್ವಾನವನ್ನು ವಿರೋಧಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಮಿತಿಯ ಜಿಲ್ಲಾ ಸಂಯೋಜಕ ಶ್ರೀಕಾಂತ ಮೋದಿ, ವಿವಿಧ ಸಂಘಟನೆಯ ಮುಖಂಡರಾದ ಲಕ್ಷ್ಮೀಕಾಂತ ಸ್ವಾದಿ,ಸಂತೋಷ ಸೊನವಾಣೆ,ರಾಜು ವಾಘ್ಮಾರೆ,ಶಂಕರ ಚೊಕಾ,ಚಿದಾನಂದ ಮಠಪತಿ,ಗುರು ಹಿರೇಮಠ,ಮಹೇಶ ಕೆಂಭಾವಿ,ಶ್ರೀಧರ ಕಂತಿ,ಉದಯಕುಮಾರ,ಹಣಮಂತ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡರು.