ಕಲಬುರಗಿ: ಅತಿವೃಷ್ಟಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಪ್ರತಿ ಎಕರೆ ಬೆಳೆ ಹಾನಿಗೆ 25 ಸಾವಿರ ರೂ.ಗಳ ಪರಿಹಾರ, ಸರ್ಕಾರಿ ಮತ್ತು ಖಾಸಗಿ ಬೆಳೆ ಸಾಲ ಮನ್ನಾ, ಬಾಕಿ ಇರುವ ಬೆಳೆ ಮಿಮೆ ಹಣ ಬಿಡುಗಡೆ ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಕೆಪಿಆರ್‍ಎಸ್ ಸಂಘೆನೆ ನೆತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರ ಬೃಹತ ಸಮೂಹಿಕ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು. ಸಂಘಟನೆಗಳ ಪ್ರಮುಖರಾದ ಶರಣಪ್ಪ ಮಮಶೆಟ್ಟಿ, ಅಲ್ತಾಫ ಇನಾಮದಾರ, ಸುಭಾಷ ಜೇವರ್ಗಿ, ಎಂ.ಬಿ. ಸಜ್ಜನ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಮುಖಂಡರು, ರೈತರು, ಕೃಷಿಕರು ಭಾಗವಹಿಸಿದ್ದರು.