
ಕಲಬುರಗಿ: ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಎದುರು ಇಂದು ವೈಜ್ಞಾನಿಕ ಮನೋವೃತ್ತಿ ದಿನ ಆಚರಿಸಲಾಯಿತು. ಜೊತೆಗೆ ಹುತಾತ್ಮರಾದ ಡಾ.ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ನಮನ ಸಲ್ಲಿಸಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಪ್ರೊ.ಆರ್.ಕೆ.ಹುಡಗಿ, ಸಮಿತಿ ಜಿಲ್ಲಾ ಅಧ್ಯಕ್ಷ ಶಿವಶರಣ ಮುಳೆಗಾಂಗ್, ಡಾ.ಶ್ರೀಶೈಲ್ ಘೂಳಿ ಸೇರಿದಂತೆ ಮತ್ತಿತರರು ಇದ್ದರು.