ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಕೆಎಚ್ ಬಿ ಕಾಲೋನಿಯ ಎಂ ಆರ್ ಸಿ ಆರ್ ಬಡಾವಣೆಯಲ್ಲಿ ಗೋವಿಂದರಾಜನಗರ ವಾರ್ಡ್ ಕಾಂಗ್ರೆಸ್ ಸಮಿತಿ, ದುಗ್ಲಪ್ಪ ಸ್ಮಾರಕ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ, ವೃದ್ಧಾಪ್ಯ ವೇತನ, ವಿಧವಾ ವೇತನ, ಆಯುಷ್ ಭಾರತ ಆರೋಗ್ಯ ಕಾರ್ಡ್, ಕಾರ್ಮಿಕ ಕಿಟ್, ಒಂಟಿ ಮನೆ ಆದೇಶ ಪತ್ರ, ವೆಲ್ಡಿಂಗ್ , ಎಲೆಕ್ಟ್ರಿಕಲ್, ಪ್ಲಂಬರ್, ಮೇಸನ್ ಸೇರಿದಂತೆ ವಿವಿಧ ಸವಲತ್ತು ಕಿಟ್ ಗಳನ್ನು ಶಾಸಕ ಪ್ರಿಯಕೃಷ್ಣ, ಶಾಸಕ ಎಂ.ಕೃಷ್ಣಪ್ಪ ವಿತರಿಸಿದರು. ಟ್ರಸ್ಟ್ ಅಧ್ಯಕ್ಷ ಡಿ. ಉಮಾಶಂಕರ್, ಯುವ ಕಾಂಗ್ರೆಸ್ ಮುಖಂಡ ಯು. ವರುಣ್ ಕುಮಾರ್, ಕಾಂಗ್ರೆಸ್ ಕಾರ್ಯಕರ್ತರಾದ ಕೃಷ್ಣಮೂರ್ತಿ, ಹನುಮಂತರಾಜು ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.