ಕಲಬುರಗಿ: ಕೇಂದ್ರ ಸರಕಾರದ ಪ್ರೋತ್ಸಾಹಧನ ಸೇರಿಸಿ 10 ಸಾವಿರ ರೂಗಳ ಗೌರವಧನ ಮತ್ತು ಅಂಗನವಾಡಿ ಬಿಸಿಯೂಟದ ಕಾರ್ಯಕರ್ತೆಯರಿಗೆ ನೀಡಿದಂತೆ 1 ಸಾವಿರ ರೂಗಳ ಹೆಚ್ಚಳ ಆದೇಶ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯಿಂದ ಮೂರು ದಿನಗಳ ಅಹೋರಾತ್ರಿ ಧರಣಿ ಆರಂಭಿಸಲಾಯಿತು.ವಿ.ಜಿ ದೇಸಾಯಿ,ಶಿವಲಿಂಗಮ್ಮ,ಗೀತಾ ಮಳ್ಳಿ,ಸಂಗೀತಾ ಸಾವಳಗಿ,ಜಯಶ್ರೀ,ವಿಜಯಲಕ್ಷ್ಮೀ,ಶಾರದಾ ಇಜೇರಿ,ಲಕ್ಷ್ಮೀ ಮಂದೇವಾಲ ಸೇರಿದಂತೆ ಹಲವರು ಪಾಲ್ಗೊಂಡರು.