ಕಲಬುರಗಿ: ಭಾರತದ ಮೇಲೆ ಅಮೇರಿಕಾ ವಿಧಿಸಿದ ಶೇ 50 ಸುಂಕದ ಆರ್ಥಿಕ ನಿರ್ಬಂಧವನ್ನು ಖಂಡಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ಕಲಬುರಗಿವತಿಯಿಂದ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.ಶರಣಬಸ್ಸಪ್ಪ ಮಮಶೆಟ್ಟಿ,ಉಮಾಪತಿ ಮಾಲೀಪಾಟೀಲ,ಭೀಮಾಶಂಕರ್ ಮಾಡ್ಯಾಳ್, ಗಣಪತರಾವ್ ಕೆ. ಮಾನೆ,ನಾಗೇಂದ್ರಪ್ಪ ಥಂಬೆ,ಅರ್ಜುನ್ ಗೊಬ್ಬೂರ್ ಸೇರಿದಂತೆ ಅನೇಕರು ಪಾಲ್ಗೊಂಡರು.