ಕಲಬುರಗಿ: ನಾಡಿನ ಸುಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಆಧಾರರಹಿತ, ಅಪಪ್ರಚಾರದ ಷಡ್ಯಂತ್ರ ಖಂಡಿಸಿ, ಮತ್ತು ಷಡ್ಯಂತ್ರದ ತನಿಖೆಗೆ ಆಗ್ರಹಿಸಿ ಇಂದು ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ರಾಜಕುಮಾರ್ ಪಾಟೀಲ ತೇಲ್ಕೂರ,ನಿತೀನ್ ಗುತ್ತೇದಾರ, ದಿವ್ಯಾ ಹಾಗರಗಿ, ಸುರೇಶ ತಂಗಾ, ಲಕ್ಷ್ಮೀಕಾಂತ ಸ್ವಾದಿ,ನಾಗಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ಸಾರವಾಡ ಅವರು ಸೇರಿದಂತೆ ಹಲವಾರು ಅಭಿಮಾನಿಗಳು ಪಾಲ್ಗೊಂಡರು.