ನಗರದ ವಿಜಯನಗರ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿದ ವೈಟ್ ಟ್ಯಾಪಿಂಗ್ ರಸ್ತೆಯನ್ನು ಶಾಸಕ ಎಂ. ಕೃಷ್ಣಪ್ಪ ಉದ್ಘಾಟಿಸಿ, ಬಳಿಕ ಅರ್ಹ ಫಲಾನುಭವಿಗಳಿಗೆ ಒಂಟಿ ಮನೆ ನಿರ್ಮಾಣ ಮಾಡಲು ಕಾರ್ಯದೇಶ ಪತ್ರ, ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದರು. ಸ್ಥಳೀಯ ನಿವಾಸಿಗಳು, ಬಿಬಿಎಂಪಿ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.