Home ಜಿಲ್ಲೆ ಹೆಚ್.ವೀರಾಪುರದಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮ ದಿನಾಚರಣೆ

ಹೆಚ್.ವೀರಾಪುರದಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮ ದಿನಾಚರಣೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ.ಏ.1: ಜಿಲ್ಲೆಯ ಕುರುಗೋಡು ತಾಲೂಕು ಎಚ್ ವೀರಾಪುರ ಗ್ರಾಮದ ಶ್ರೀ ಜ್ಞಾನಜ್ಯೋತಿ ಜಡೇಶ ಶಿವಲಿಂಗ ಮಂದಿರದಲ್ಲಿ ಕರ್ನಾಟಕ ರತ್ನ  ಡಾ. ಶಿವಕುಮಾರ ಮಹಾಸ್ವಾಮಿಗಳ 119ನೇ ಜನುಮದಿನವನ್ನು  ಆಚರಿಸಲಾಯಿತು.

ಈ ವೇಳೆ ಜಡೇಶ ತಾತ ಮಾತನಾಡಿ ಅಕ್ಷರ, ಅನ್ನ,ಆಶ್ರಯ,ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ಮಹಾನ್ ಚೇತನ ಹಾಗೂ ಅವರ ಆಚಾರ -ವಿಚಾರಗಳು ಇಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು.

 ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟ ಶಿವಕುಮಾರ ಶ್ರೀಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಅದರ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಈ ವೇಳೆ  ಶಿವನಗೌಡ ಪಾಟೀಲ್, ಶಂಕರ್ ಗೌಡ,ಶಿವರಾಮಪ್ಪ,  ಶ್ರೀಮಠದ ಭಕ್ತರು  ಇದ್ದರು.