
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.10: ತುಂಗಭದ್ರ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಹಾಗೂ ಕೆಳಮಟ್ಟದ ಕಾಲುವೆಗಳಿಗೆ ಇಂದು ನೀರು ಬಿಡಲಾಗಿದೆ.
ಇಂದು ಬೆಳಿಗ್ಗೆ 9:15 ಕ್ಕೆ ಎಲ್ ಎಲ್ ಸಿ ಕಾಲುವೆಗೆ ಹಾಗೂ 10:15 ಕ್ಕೆ ಹೆಚ್.ಎಲ್.ಸಿ ಕಾಲುವೆಗೆ ರೈತ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ತುಂಗಭದ್ರ ಬೋರ್ಡ್ ನ ಮುಖ್ಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣನಾಯಕ ಹಾಗೂ ಇತರೆ ಇಂಜಿನಿಯರ್‌ಗಳು ಪೂಜೆ ನೆರವೇರಿಸಿ ನೀರು ಬಿಡುಗಡೆ ಮಾಡಿದರು.
ಈ ವೇಳೆ ಉಪ ಸ್ಥಿತರಿದ್ದು ಈ ನೀರಿನ್ನು ಬಳಸಿಕೊಂಡು ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದ್ದಾರೆ.