
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.31 ತಾಲೂಕಿನ ಕೆ ಓಬಳಾಪುರ ಗ್ರಾಮದ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ನಗದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಕೃಷಿಕ ನಾಗರಾಜ ಅವರು ಕುಟುಂಬದವರೊಂದಿಗೆ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಕೂಲಲಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದಾಗ ಬೀಗ ಹಾಕಿರುವ ಮನೆಯನ್ನು ನೋಡಿ ಬೀಗ ಒಡೆದು 15ಲಕ್ಷ ನಗದು ದೋಚಿದ್ದಾರೆ. ದೇವಸ್ಥಾನದಿಂದ ವಾಪಸ್ ಬಂದವಾಗ ಕಳ್ಳತನವಾಗಿರುವುದನ್ನು ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾನವಿ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ವಿಕಾಸ್ ಲಂಬಾಣಿ, ಪಿಎಸ್ಐ ಬಸವರಾಜ್ ಅಡವಿಬಾವಿ ಇದ್ದರು.