ಹನುಮಾನ್ ಖ್ಯಾತಿಯ ನಿರ್ದೇಶಕನ ಮತ್ತೊಂದು ಸಿನೆಮಾ ʻಅಧಿರʼ

ವಿಶೇಷವಾಗಿ ಕಥೆ ಹೇಳುವಿಕೆಯ ಮೂಲಕವೇ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್‌ ವರ್ಮಾ ಸಹ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಪ್ರೇಕ್ಷಕರ ಮನ ಗೆದ್ದಿರುವ

ಹನುಮಾನ್ ಖ್ಯಾತಿಯ ಪ್ರಶಾಂತ್ ವರ್ಮಾ, ಮತ್ತೊಮ್ಮೆ ಆರ್‌ಕೆಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಿ, ಭಾರೀ ಬಜೆಟ್‌ನ ಸೂಪರ್‌ಹೀರೋ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ʻಅಧಿರʼ ಮೂಲಕ ಹೊಸ ಹೀರೋ ಆಗಿ ಕಲ್ಯಾಣ್ ದಾಸರಿ ಅದ್ದೂರಿಯಾಗಿ ಸಿನಿ ಪ್ರವೇಶ ಮಾಡುತ್ತಿದ್ದಾರೆ. ಅವರ ಜೊತೆಗೆ ಹಿರಿಯ ನಟ ಎಸ್.ಜೆ. ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿವಾಜ್ ರಾಮೇಶ್ ದುಗ್ಗಲ್ ಅವರ ಆರ್‌ಕೆಡಿ ಸ್ಟುಡಿಯೋಸ್ ಈ ಪ್ರತಿಷ್ಠಿತ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ನಿರ್ದೇಶನವನ್ನು ಶರಣ್ ಕೋಪಿಸೆಟ್ಟಿ ಕೈಗೆತ್ತಿಕೊಂಡಿದ್ದಾರೆ.

ಪ್ರಸ್ತುತ ʻಅಧಿರʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎಸ್. ಜೆ. ಸೂರ್ಯ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಧರ್ಮವನ್ನು ರಕ್ಷಿಸಲು ಹೋರಾಡುವ ಹೊಸ ಸೂಪರ್‌ಹೀರೋನ ಕಥೆಯೇ ಈ ʻಅಧಿರʼ. ಆ್ಯಕ್ಷನ್‌, ದೃಶ್ಯ ವೈಭವ, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.