
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.13: ತಾಲೂಕಿನ ಸಿರಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗ ಸರಸ್ವತಿ ವಿಗ್ರಹವನ್ನು ವೀರಶೈವ ವಿದ್ಯಾವರ್ಥಕ ಸಂಘದ ಅಜೀವ ಸದಸ್ಯರಾಗಿದ್ದ ದಿ. “ಅಂಗಡಿ ಚೆನ್ನಬಸಪ್ಪ” ಅವರ ಧರ್ಮಪತ್ನಿ “ನೀಲಮ್ಮ” ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು ಕೊಡುಗೆಯಾಗಿ ನೀಡಿದ್ದಾರೆ,
ಇವರು ಈ ಹಿಂದೆಯೂ ಸಹ ಅನೇಕ ಕೊಡುಗೆಗಳನ್ನು ಈ ಸರ್ಕಾರಿ ಶಾಲೆಗೆ ನೀಡಿದ್ದಾರೆ.
ಗ್ರಾಮದ ಜನತೆ ಭಜನೆ ಮಾಡುತ್ತ ವಿಗ್ರಹವನ್ನು ಮೆರವಣಿಗೆ ಮಾಡಿಕೊಂಡು ಶಾಲೆಗೆ ತಂದು ಪ್ರತಿಷ್ಠಾಪನೆ ಮಾಡಿದ್ದಾರೆ.

























