
ಸಂಜೆವಾಣಿ ನ್ಯೂಸ್
ಮೈಸೂರು: ಮಾ.09:- ಕೈವಾರ ತಾತಯ್ಯ 18ನೇ ಶತಮಾನಕ್ಕೆ ಸೇರಿದವರು ಸಮಾಜಕ್ಕೆ ಇವರ ಸಂದೇಶಗಳು ಸಮ ಸಮಾಜ ನಿರ್ಮಾಣ ಮಾಡಲು ಕೈಗೊಂಡಂತಹ ಕೆಲಸ ಕಾರ್ಯಗಳು ಸದಾ ಮಾದರಿ. ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದರೊಂದಿಗೆ ಪ್ರತಿಯೊಬ್ಬರು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಕಿರುರಂಗಮoದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಜಾತಿ ಬೇದಭಾವವಿಲ್ಲದೆ ಅತಿ ಹೆಚ್ಚು ಮಕ್ಕಳು ಅರ್ಚಕರ ವೃತ್ತಿ, ಶಾಸ್ತ್ರೀಯ ಸಂಗೀತ, ಭರತನಾಟ್ಯದಂತಹ ಕಲೆಯ ಕಡೆ ಅತಿ ಹೆಚ್ಚು ಒಲವನ್ನು ತೋರುತ್ತಿದ್ದಾರೆ, ಇದಕ್ಕೆ ಪೆÇ್ರೀತ್ಸಾಹ ನೀಡುತ್ತಿರುವ ಪ್ರತಿಯೊಬ್ಬ ತಂದೆ ತಾಯರಿಗೂ ಅಭಿನಂದನೆಯನ್ನು ತಿಳಿಸಬೇಕೆಂದು ಹೇಳಿದರು.
ಮಹಾನ್ ವ್ಯಕ್ತಿಗಳ ಕಾರ್ಯಕ್ರಮಕ್ಕೆ ಎಲ್ಲರನ್ನು ಕರೆತರಬೇಕು ಮತ್ತು ಇವರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕೈವಾರ ತಾತಯ್ಯ ಸಮಾಜಕ್ಕೆ ನೀಡಿದ ಕೊಡುಗೆ ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು ತಾತ್ತಯ್ಯ ನವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು ಎಂದರು. ಸಮಾಜದಲ್ಲಿ ಮಹಾನ್ ವ್ಯಕ್ತಿ ಗಳ ಬಗ್ಗೆ ತಿಳಿದುಕೊಂಡಾಗ ನಮ್ಮಲ್ಲಿರುವ ಲೋಪದೋಷಗಳು ಕಡಿಮೆಯಾಗುತ್ತದೆ ಎಂದರು.
ಉಪನ್ಯಾಸಕ ಪೆÇ್ರ.ಹೆಚ್ಎಸ್ ನರಸಿಂಹಯ್ಯ, ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಸುದರ್ಶನ್ ಅಂಕಣಕಾರ ಗುಬ್ಬಿ ಗೂಡು ರಮೇಶ್, ಗಣ್ಯರಾದ ವೆಂಕಟೇಶ್, ಮೀನಾ ತೂಗುದೀಪ್, ಶ್ರೀನಾಥ್ ಬಾಬು, ವಿಜಯ ಸಂಪತ್ ಕುಮಾರ್, ಕೆ ಸಿ ಪ್ರಕಾಶ್ ಗೋಪಾಲಕೃಷ್ಣ, ಆರ್.ಎನ್. ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.





























