
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.16: ಇಲ್ಲಿನ ನಿಮಗಾಗಿ ನಾವು ಸಂಸ್ಥೆ ತಾಲೂಕಿನ ಶಂಕರಬಂಡೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿತು.
ಕಾರ್ಯಕ್ರಮವನ್ನು ಗೋಡೆ ಶಿವರಾಜ್ ಬರಹಗಾರರು, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಮತ್ತು ಪ್ರಾಥಮಿಕ ಶಾಲೆ ಮುಖ್ಯ ಗುರುಗಳು ಶ ಗಾದಿಲಿಂಗಪ್ಪ ಮತ್ರು ಫ್ರೌಢಶಾಲೆ ಮುಖ್ಯ ಗುರುಗಳು ರಾಮಲಿಂಗರೆಡ್ಡಿ ಉದ್ಘಾಟಿಸಿದರು,
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು, ರೈತರನ್ನು, 10 ನೇ ತರಗತಿಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯ್ತು.
ಪ್ರತಾಪ್ ಗೌಡ ಮಾಜಿ ಸೈನಿಕ ಮಾತಾಡಿ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು ತಿಳಿಸುತ್ತಾ ಯುವ ಪೀಳಿಗೆ ಹೆಚ್ಚು ಸೈನ್ಯ ಸೇರುವಲ್ಲಿ ಆಸಕ್ತಿ ತೋರಬೇಕು & ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ದೇಶ ಸೇವೆಯೇ ದೇವರ ಸೇವೆ ಎಂದು ತಿಳಿಸಿದರು.ಸಂಸ್ಥೆಯವರು ನನ್ನನ್ನ ಸನ್ಮಾನಿಸಿದ್ದು ಖುಷಿತಂದಿದೆ ಎಂದರು.
ಮುಖ್ಯ ಅತಿಥಿಗಳಾದ ಚಂದ್ರಶೇಖರ್ ಬಿ, ಪ್ರಾಧ್ಯಾಪಕರು, ಸರ್ ಎಂವಿಐಟಿ ಕಾಲೇಜು ಬೆಂಗಳೂರು ರವರು ಮಾತಾಡಿ ಕಾರ್ಯಕ್ರಮದ ನಿಮಿತ್ತ ಮಕ್ಕಳಿಗೆ ವಿವಿಧ ಕ್ರಿಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ 100 ಕ್ಕೂ ಹೆಚ್ಚು ಮಕ್ಕಳಿಗೆ ಬಹುಮಾನ ನೀಡಿ ಅವರನ್ನ ಪ್ರೋತ್ಸಾಹಿಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್ ಮಾತಾಡಿ, ಸಮಾಜಮುಖಿ ಕೆಲಸಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಪದಾಧಿಕಾರಿಗಳು,ಸದಸ್ಯರು, ಎಸ್ ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಶಾಲೆಯ ಶಿಕ್ಷಕರು , ಸಿಬ್ಬಂದಿಗಳು ಹಾಗೂಸಂಸ್ಥೆಯ ಕಾರ್ಯ ನಿರ್ವಾಹಕಿ.ಜೋಸ್ನಾ ಕಾಕಿ, ಅವಿನಾಶ್, ದಕ್ಷಿಣ ಮೂರ್ತಿ, ವೀರೇಶ್, ಬಾಲಸುಬ್ರಹ್ಮಣ್ಯ, ರಾಜು ಕೆ ಹೆಚ್, ಹರೀಶ್,ಹರ್ಷ,ಪ್ರಶಾಂತ್ ಚಂದ್ರು,ವಿನಯ್, ಶಿವರಾಜ್, ಮನೋಹರ್, ಸೋಮು, ಮಾರ್ಕಂಡೇಯ ಪಾಲ್ಗೊಂಡಿದ್ದರು.