
ನವದೆಹಲಿ, ಡಿ.೧೩: ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿ (೧೭೧) ಅವರ ಅಮೋಘ ಶತಕದ ನೆರವಿನಿಂದ ಭಾರತ ತಂಡ ೧೯ ವರ್ಷದೊಳಗಿನವರ ೫೦ ಓವರ್ ಗಳ ಏಷ್ಯಾಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಇ ವಿರುದ್ಧ.೨೩೪ ರನ್ ಗಳ ಭರ್ಜರಿ ಜಯ ಗಳಿಸಿದೆ.ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಪದ್ಯದಲ್ಲಿ ಭಾರತ ೫೦ ಓವರ್ ಗಳಲ್ಲಿ ೪೩೩ ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಯುಎಇ ೭ ವಿಕೆಟ್ ಗೆ ೧೯೯ ರನ್ ಗಳಿಸಿಲಷ್ಟೇ ಶಕ್ತಗೊಂಡಿತು.೫೬ ಎಸೆತಗಳಲ್ಲಿ ಮೂರಂಕಿ ಮೊತ್ತ ಮುಟ್ಟಿದ ಸೂರ್ಯವಂಶಿ, ೯೫ ಎಸೆತಗಳಲ್ಲಿ ೧೭೧ ರನ್ ಗಳಿಸಿದರು.
ಈ ಮೂಲಕ ಹಿರಿಯರ ರಾಷ್ಟ್ರೀಯ ತಂಡಕ್ಕೆ ತಾವು ಅರ್ಹರಾಗಿದ್ದೇನೆ ಎಂದು ಮತ್ತೊಮ್ಮೆ ಸಾರಿದರು.೯ ಫೋರ್ ಮತ್ತು ೧೪ ಸಿಕ್ಸರ್ ಗಳನ್ನು ಅವರು ಸಿಡಿಸಿದರು. ಈ ಪ್ರದರ್ಶನವು ೨೦೦೮ ರಲ್ಲಿ ನಮೀಬಿಯಾ ಅಂಡರ್ ೧೯ ವಿರುದ್ಧ ೧೨೪ ರನ್ ಗಳಿಸಿದ ಆಸ್ಟ್ರೇಲಿಯಾದ ಮೈಕೆಲ್ ಹಿಲ್ ಅವರ ೧೨ ಸಿಕ್ಸರ್ ಗಳನ್ನು ಹಿಂದಿಕ್ಕುವ ಮೂಲಕ ಒಂದು ಇನಿಂಗ್ಸ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಯುವ ಏಕದಿನ ಗಡಿಯನ್ನು ಮುರಿದಿದೆ.
ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ೧೯ ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಭಾಗವಹಿಸಲಿದ್ದಾರೆ. ಮಾಧ್ಯಮಗಳು ಮತ್ತು ಅಭಿಮಾನಿಗಳು ಈಗಾಗಲೇ ಅವರ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶದ ಬಗ್ಗೆ ಊಹಿಸಲು ಪ್ರಾರಂಭಿಸಿದ್ದಾರೆ, ಅವರ ಸ್ಫೋಟಕ ಫಾರ್ಮ್ ಮತ್ತು ಇತ್ತೀಚಿನ ದಿನಗಳಲ್ಲಿ ತ್ವರಿತ ಏರಿಕೆಗೆ ಇದು ಕಾರಣವಾಯಿತು. ಮುಂದಿನ ವರ್ಷ ಫೆಬ್ರವರಿಯಲ್ಲಿ ತವರಿನಲ್ಲಿ ನಡೆಯಲಿರುವ ಟಿ೨೦ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಜ್ಜಾಗುತ್ತಿರುವುದರಿಂದ ಭಾರತೀಯ ಆಯ್ಕೆಗಾರರು ಮತ್ತು ತರಬೇತುದಾರರು ವೈಭವ್ ಆಯ್ಕೆ ಮಾಡಿದರ ಅಚ್ಚರಿಯಿಲ್ಲ.


























