
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.01 ನಗರದ ಸಿರುಗುಪ್ಪ ರಸ್ತೆಯ ವಿರಾಟ್ ನಗರದಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಗೀತ ಗಾಯನ ಕಾರ್ಯಕ್ರಮ ನೆರವೇರಿತು
ಕಾರ್ಯಕ್ರಮದ ಉದ್ಘಾಟನೆಯನ್ನು.ಎನ್ ಬಸವರಾಜ ನೆರವೇರಿಸಿ ಕರ್ನಾಟಕ ಮಾತೆ ಮಡಿಲಲ್ಲಿ ಜನಿಸಿದ ಹಾನಗಲ್ಲ ಕುಮಾರಸ್ವಾಮಿಯವರ ನಿರ್ಧಿಷ್ಟ ಸಾಧನೆಯ ಗುರಿ ಪಂಡಿತ ಪಂಚಾಷರಿ ಗವಾಯಿ ಡಾ. ಪಂ .ಪುಟ್ಟರಾಜ ಕವಿ ಗವಾಯಿ ಯವರಂತ ಪುತ್ರರತ್ನರನ್ನು ರಾಜ್ಯವಲ್ಲದೆ ದೇಶವಿದೇಶ ಪ್ರಪಂಚಕ್ಕೆ ನೀಡಿದ ಕೀರ್ತಿ ಕನ್ನಡನಾಡಿಗೆ ಸಲ್ಲುತ್ತದೆ ಅವರ ನಿಸ್ವಾರ್ಥ ಸೇವೆ ಇಂತಹ ಅಂಗವಿಕಲರ ಪಾಠಶಾಲೆಯಾಗಿ ನಿಮ್ಮಂತಹ ಶಿಷ್ಯವೃಂದ ಬೆಳೆಯುವದಕ್ಕೆ ಸಾದ್ಯವಾಯಿತು ಇದು ವಿಶ್ವ ರಂಗಭೂಮಿ ದಿನಾಚರಣೆ ಸಾರ್ಥಕವಾಯಿತು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದು, ಹೆಚ್ ತಿಪ್ಪೇಸ್ವಾಮಿ ಮಾತನಾಡಿ, ದೇಶವಿದೇಶಗಳಲ್ಲಿ ರಾಘವರು ನಾಡೋಜ ಬೆಳಗಲ್ ವೀರಣ್ಣ ನಾಡೋಜ ಮನ್ಸೂರು ಸುಭದ್ರಮ್ಮನವರು ನಾಗೇಶಶಾಸ್ತ್ರೀಯವರು ಬೆಳಗಿದಬಳ್ಳಾರಿಕೀರ್ತಿ
ಈ ವತ್ತಿಗೂ ಮುಂದುವರೆದಿದೆ ಅವರ ಹಾದಿಯಲ್ಲಿ ಈ ಪಾಠಲೆಯ ಮಕ್ಕಳು ಬೆಳೆಯುವಂತಾಗಬೇಕು ಎಂದರು
ಅತಿಥಿಗಳಾಗಿ ದೊಡ್ಡ ಬಸವಗವಾಯಿ, ವಿರುಪಾಕ್ಷ ದೇವಲಾಪುರ, ಕವಿತಾ ಕಗ್ಗಲ್ ಭಾಗವಹಿಸಿದ್ದರು
ಈ ವೇಳೆ ತಿಪ್ಪೇಸ್ವಾಮಿ ಹಾಗೂ ವಿರುಪಾಕ್ಷ ದೇವಲಾಪುರ ಇವರಿಗೆ ಸನ್ಮಾನಿಸಲಾಯಿತು ಪಂಚಾಕ್ಷರಿ ನಿರೂಪಣೆ ನಡೆಸಿಕೊಟ್ಟರು






















