ವಿಜಯನಗರ ಜಿಲ್ಲೆಯಲ್ಲಿ ಬಸ್‌ ಸಂಚಾರಕ್ಕೆ ಧಕ್ಕೆ ಇಲ್ಲ! ಆದರೂ ತಪ್ಪದ ಪರದಾಟ.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ  (ವಿಜಯನಗರ)ಅ5:
ವೇತನ ಹಿಂಬಾಕಿ ಪಾವತಿ,  ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆಯಿಂದ ಬಸ್‌  ಸಂಚಾರ  ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರೂ, ನಗರದಲ್ಲಿ ಹಾಗೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಸ್‌ಸಂಚಾರಸಹಜವಾಗಿದೆ ಎಂದರೂ ಪ್ರಯಾಣಿಕರ ಪರದಾಟ ಮಾತ್ರ ತಪ್ಪಲಿಲ್ಲಾ.
ನಗರದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಳೆ ಅರಂಭವಾಯಿತು, ಹೀಗಾಗಿ  ಕೆಲವು  ಬಸ್‌ಗಳು  ಡಿಪೋದಿಂದ ಬಸ್‌ ನಿಲ್ದಾಣಕ್ಕೆ ಬರುವುದು ವಿಳಂಬವಾಯಿತು. ಅದು ಬಿಟ್ಟರೆ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಂಪಿ, ಹುಲಿಗಿ ಮುಂತಾದ ಕಡೆಗಳಿಗೆ ವಿರಳವಾಗಿ ಬಸ್‌ಗಳು ಓಡಾಟ ಖಾಸಗಿ ಚಾಲಕರ ಸಹಾಯದಿಂದ ಆರಂಭವಾಗಿದೆ.
‘ಜಿಲ್ಲೆಯ ಹರಪನಹಳ್ಳಿಯಲ್ಲಿ ಮಾತ್ರ ಬಸ್ ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟಾಗಿದೆ, ಉಳಿದ ಯಾವ ತಾಲ್ಲೂಕುಗಳಲ್ಲೂ ಸಮಸ್ಯೆ ಇಲ್ಲ, ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಖಾಸಗಿ ಚಾಲಕರ ಸೇವೆಯನ್ನೂ ಪಡೆಯಲಾಗಿದೆ’ ಎಂದು ಕೆಕೆಆರ್‌ಟಿಸಿ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ತಿಳಿಸಿದರು.
ಈ ಮಧ್ಯ ಬಸ್ ಗಳು ನಿಲ್ದಾಣದಲ್ಲಿ ನಿಂತಿದ್ದರೂ ಚಾಲಕ ನಿರ್ವಾಹಕತರಿಲ್ಲದೆ ಕೇವಲ ಸ್ಥಳೀಯ ಸಂಚಾರ ಮಾತ್ರ ಖಾಸಗಿಯವರೊಂದಿಗೆ ನಡೆದಿತು. ಬೆರಳೆಣಿಕೆಯ ವಾಹನ ಚಾಲಕರು ಬಂದಿದ್ದು ಅವರು ಸಹ ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗಿತು. ಸಾಕಷ್ಟು ಪ್ರಚಾರದ ನಡುವೆಯೂ ಅನೇಕರು ಬಸ್ ನಿಲ್ದಾಣಕ್ಕೆ ಕುಟುಂಬ ಸಮೇತ ಬಂದು ವಾಹನಗಳಿಲ್ಲದೆ ಪರದಾಡುವಂತಾಗಿತು.