ವಿಂಡೀಸ್ ವಿರುದ್ಧ ಟೆಸ್ಟ್ಸರಣಿಗೆ ಭಾರತ ತಂಡ ಪ್ರಕಟ ಅಯ್ಯರ್‌ಗೆ ವಿಶ್ರಾಂತಿ

ಮುಂಬೈ, ಸೆ.೨೫: ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ೧೫ ಸದಸ್ಯರ ತಂಡವನ್ನು ಹಿರಿಯ ಪುರುಷರ ಆಯ್ಕೆ ಸಮಿತಿ ಇಂದು ಪ್ರಕಟಿಸಿದೆ. ವಿಶೇಷವೆಂದರೆ, ವಿವಾದದಲ್ಲಿದ್ದ ಶ್ರೇಯಸ್ ಅಯ್ಯರ್ ಅವರಿಗೆ ಬೆನ್ನು ನೋವು ಪದೇ ಪದೇ ಪುನರಾವರ್ತನೆಯಾಗುತ್ತಿರುವ ಕಾರಣ ಟೆಸ್ಟ್ ತಿಂಗಳಿಂದ ಆರು ತಿಂಗಳ ವಿರಾಮವನ್ನು ಬಿಸಿಸಿಐ ನೀಡಿದೆ.
ಕುತೂಹಲಕಾರಿ ಸಂಗತಿಯೆಂದರೆ, ಕಣದಲ್ಲಿದ್ದ ಸರ್ಫರಾಜ್ ಖಾನ್ ಅವರನ್ನು ಮತ್ತೊಮ್ಮೆ ಕೈಬಿಡಲಾಗಿದೆ. ಹೀಗಾಗಿ ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುವ ನಿರೀಕ್ಷೆಯಿದೆ.
ಕರ್ನಾಟಕದಿಂದ ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಗೆ ಸ್ಥಾನ ಕಲ್ಪಿಸಲಾಗಿದೆ. ೮ ವರ್ಷಗಳ ನಂತರ ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಕರುಣ್ ನಾಯರ್ ಅವರನ್ನು ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.
ಅಕ್ಟೋಬರ್ ೨ರಿಂದ ೬ರವರೆಗೆ ಅಹಮದಾಬಾದ್ ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ ೧೦ರಿಂದ ೧೪ರವರೆಗೆ ನವದೆಹಯಲ್ಲಿ ನಡೆಯಲಿದೆ.