ರಷ್ಯಾದ 210 ಬಿಲಿಯನ್ ಯುರೊ ಆಸ್ತಿ ತಡೆಗೆ ಯುರೋಪ್ ಒಕ್ಕೂಟ ನಿರ್ಧಾರ

ಕೈವ್, ಡಿ.13:- ಉಕ್ರೇನ್‍ನ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದಾಗಿನಿಂದ ಯುರೋಪಿಯನ್ ಒಕ್ಕೂಟದಲ್ಲಿ ಸ್ಥಗಿತಗೊಂಡಿರುವ 210 ಬಿಲಿಯನ್ ಯುರೋ ವರೆಗಿನ ರಷ್ಯಾದ ಆಸ್ತಿಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯಲು ಯುರೋಪಿಯನ್ ಒಕ್ಕೂಟದ ಸರ್ಕಾರಗಳು ಒಪ್ಪಿಕೊಂಡಿವೆ.


ರಷ್ಯಾದ ಹೆಚ್ಚಿನ ಹಣ ಬೆಲ್ಜಿಯಂನ ಬ್ಯಾಂಕ್ ಯೂರೋಕ್ಲಿಯರ್‍ನಲ್ಲಿದೆ ಮತ್ತು ಮುಂದಿನ ವಾರ ನಡೆಯಲಿರುವ ಯುರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಯುರೋಪಿಯನ್ ನಾಯಕರು ಒಪ್ಪಂದ ಅಂತಿಮಗೊಳಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ನಡುವೆ ಉಕ್ರೇನ್ ತನ್ನ ಮಿಲಿಟರಿ ಮತ್ತು ಆರ್ಥಿಕತೆಗೆ ಹಣಕಾಸು ಒದಗಿಸಲು ಸಹಾಯ ಮಾಡಲು ಸಾಲಕ್ಕಾಗಿ ಹಣವನ್ನು ನೀಡುವಂತೆ ಯುರೋಪಿಯನ್ ಒಕ್ಕೂಟದ ನಾಯಕರಿಗರ ಮನವಿ ಮಾಡಿದ್ದಾರೆ.


ರಷ್ಯಾದ ಪೂರ್ಣ ಪ್ರಮಾಣದ ಯುದ್ಧದ ಸುಮಾರು ನಾಲ್ಕು ವರ್ಷಗಳ ನಂತರ ಉಕ್ರೇನ್ ನಗದು ಕೊರತೆ ಎದುರಿಸುತ್ತಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಅಂದಾಜು 135.7 ಬಿಲಿಯನ್ ಪೌಂಡ್ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ
ಯುರೋಪ್ ಅದರಲ್ಲಿ ಮೂರನೇ ಎರಡರಷ್ಟು ಒದಗಿಸುವ ಗುರಿಯನ್ನು ಹೊಂದಿದೆ, ಆದರೆ ರಷ್ಯಾದ ಅಧಿಕಾರಿಗಳು ಯುರೋಪಿಯನ್ ಒಕ್ಕೂಟ ಕಳ್ಳತನದ ಆರೋಪ ಮಾಡುತ್ತಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.


ಯುರೋಪಿಯನ್ ಒಕ್ಕೂಟದ ಸಾಲ ಯೋಜನೆಗೆ ಪ್ರತಿಕ್ರಿಯೆಯಾಗಿ, ರಷ್ಯಾದ ನ್ಯಾಯಾಲಯದಲ್ಲಿ ಬೆಲ್ಜಿಯಂ ಬ್ಯಾಂಕ್ ಯೂರೋಕ್ಲಿಯರ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ರಷ್ಯಾದ ಕೇಂದ್ರ ಬ್ಯಾಂಕ್ ತಿಳಿಸಿದೆ.
ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆದ ಕೆಲವೇ ದಿನಗಳಲ್ಲಿ ಯುರೋಪಿಯನ್ ಒಕ್ಕೂಟದ ರಷ್ಯಾದ ಆಸ್ತಿಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ಅದರಲ್ಲಿ 185 ಬಿಲಿಯನ್ ಪೌಂಡ್ ಮೊತ್ತು ಯುರೋಕ್ಲಿಯರ್ ಹೊಂದಿದೆ ಎಂದು ಸ್ಪಷ್ಡಪಡಿಸಲಾಗಿದೆ.


ರಷ್ಯಾ ನಾಶಪಡಿಸಿದ್ದನ್ನು ಪುನರ್ನಿರ್ಮಿಸಲು ಹಣವನ್ನು ಬಳಸಬೇಕೆಂದು ಯುರೋಪಿಯನ್ ಮತ್ತು ಉಕ್ರೇನ್ ವಾದಿಸುತ್ತವೆ: ಬ್ರಸೆಲ್ಸ್ ಇದನ್ನು “ಪರಿಹಾರ ಸಾಲ” ಎಂದು ಕರೆಯುತ್ತದೆ ಮತ್ತು ಉಕ್ರೇನ್‍ನ ಆರ್ಥಿಕತೆಯನ್ನು 90 ಬಿಲಿಯನ್ ಪೌಂಡ್‍ಹೆ ಬೆಂಬಲಿಸುವ ಯೋಜನೆಯನ್ನು ತಂದಿದೆ.
“ರಷ್ಯಾ ನಾಶಪಡಿಸಿದ್ದನ್ನು ಪುನರ್ನಿರ್ಮಿಸಲು ರಷ್ಯಾದ ಹೆಪ್ಪುಗಟ್ಟಿದ ಸ್ವತ್ತುಗಳನ್ನು ಬಳಸುವುದು ನ್ಯಾಯಯುತವಾಗಿದೆ – ಮತ್ತು ಆ ಹಣ ನಮ್ಮದಾಗುತ್ತದೆ” ಎಂದು ಉಕ್ರೇನ್‍ನ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ


ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮಾತನಾಡಿ “ಭವಿಷ್ಯದ ರಷ್ಯಾದ ದಾಳಿಗಳಿಂದ ಉಕ್ರೇನ್ ತನ್ನನ್ನು ತಾನು ಪರಿಣಾಮಕಾರಿಯಾಗಿ ರಕ್ಷಿಸಿಕೊಳ್ಳಲು ಈ ಸ್ವತ್ತುಗಳು ಅನುವು ಮಾಡಿಕೊಡುತ್ತದೆ” ಎಂದು ಹೇಳುತ್ತಾರೆ.


ಬ್ರಸೆಲ್ಸ್‍ನಲ್ಲಿ ರಷ್ಯಾದ ನ್ಯಾಯಾಲಯದ ಕ್ರಮ ನಿರೀಕ್ಷಿಸಲಾಗಿತ್ತು ಮತ್ತು ಯುರೋಪಿಯನ್ ಆರ್ಥಿಕ ಆಯುಕ್ತ ವಾಲ್ಡಿಸ್ ಡೊಂಬ್ರೊವ್ಸ್ಕಿಸ್ ಯುರೋಪಿಯನ್ ಹಣಕಾಸು ಸಂಸ್ಥೆಗಳು ಕಾನೂನು ಪ್ರಕ್ರಿಯೆಗೆ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿವೆ” ಎಂದು ಹೇಳಿದ್ದಾರೆ.