
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜುಲೈ21:- ಯುವಕರು ನಾಯಕತ್ವಗುಣ ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ ರವಿಕುಮಾರ್ ಅಭಿಪ್ರಾಯಪಟ್ಟರು.
ಅವರು ನಗರದ ಎಂಸಿಎಸ್ ಶಾಲೆಯ ಕ್ರೀಡಾ ಸಾಂಸ್ಕøತಿಕ ಸಂಘ ಶಾಲಾ ಸಂಸತ್ ಚುನಾವಣಾ ವಿಜೇತರಿಗೆ ಪ್ರಮಾಣ ವಚನ ಬೋಧನೆ ಹಾಗೂ ಮಾವು ಹಣ್ಣಿನ ದಿನಾಚರಣೆ ಕಾರ್ಯಕ್ರಮಗಳನ್ನು ಡ್ರಮ್ ಬಾರಿಸಿ ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲೇ ವಿದ್ಯಾರ್ಥಿಗಳು ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಾಯಕತ್ವ ಗುಣ ಬೆಳೆಯುತ್ತದೆ. ನಮ್ಮ ಸಂಸ್ಕೃತಿ ಆಚಾರ ವಿಚಾರ ತಿಳಿಯುತ್ತದೆ. ಇದು ಗುರಿ ಸಾಧನೆಗೆ ಸಹಾಯಕವಾಗುತ್ತದೆ ಎಂದರು. ಪ್ರಜಾಪ್ರಭುತ್ವದ ಯಶಸ್ಸು ಯುವಪೀಳಿಗೆಯ ಮೇಲಿದೆ ಹಾಗಾಗಿಯೇ ಸರ್ಕಾರ ಶಾಲೆಗಳಲ್ಲಿ ಸಂಸತ್ ಚುನಾವಣೆ ನಡೆಸಿ ವಿದ್ಯಾರ್ಥಿಗಳಲ್ಲಿ ಆ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಮಹದೇವಸ್ವಾಮಿ ಮಾತನಾಡಿ ಎಸ್‍ಡಿಎಂಸಿ ಶಾಲೆಯಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದ್ದು ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು. ಸಂಸತ್ ಚುನಾವಣೆಯಲ್ಲಿ ಜಯಗಳಿಸಿದವರಿಗೆ ಪ್ರಮಾಣ ವಚನ ಬೋಧಿಸಿ ಪ್ರಮಾಣ ಪತ್ರ ನೀಡಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಸೌಮ್ಯ ಮಾವು ಹಣ್ಣನ್ನು ಕತ್ತರಿಸಿ ಅತಿಥಿಗಳಿಗೆ ಹಂಚುವ ಮೂಲಕ ಮಾವು ಹಣ್ಣಿನ ದಿನಾಚರೆಗೆ ಚಾಲನೆ ನೀಡಿದರು.
ಪ್ರಾಚಾರ್ಯ ಶಶಿಧರ ಮೂರ್ತಿ ಮುಖ್ಯೋಪಾಧ್ಯಾಯ ಮಹದೇವಸ್ವಾಮಿ ಸಂಸ್ಥೆಯ ಆಡಳಿತಾಧಿಕಾರಿ ನಾಗರಾಜು ಸೇರಿದಂತೆ ಪೆÇೀಷಕರು ಅಧ್ಯಾಪಕ ವರ್ಗದವರು ಹಾಜರಿದ್ದರು.