Home ಜಿಲ್ಲೆ ಮೈಸೂರು ಮೈಸೂರಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಮೂಲಕ 1,600ಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಕನಸಿಗೆ...

ಮೈಸೂರಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಮೂಲಕ 1,600ಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಕನಸಿಗೆ ಬಲ ತುಂಬಲಾಯಿತು

ಸಂಜೆವಾಣಿ ನ್ಯೂಸ್
ಮೈಸೂರು:ಏ.05:-
ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಅತ್ಯಂತ ಪ್ರತಿಷ್ಠಿತ ಅಕ್ಷಯ ಪಾತ್ರ ಫೌಂಡೇಶನ್ ಜೊತೆಗೆ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ದೊರೆಯಬೇಕು ಎಂಬ ಉದಾತ್ತ ಉದ್ದೇಶದಿಂದ ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗ ಮಾಡಿಕೊಂಡಿದೆ. ಈ ಸಹಯೋಗದ ಭಾಗವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮೈಸೂರು ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಮೂಲಕ 1,600ಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಕನಸಿಗೆ ಬಲ ತುಂಬಲಾಯಿತು.
ಈ ಸಮಾರಂಭದಲ್ಲಿ ಮೈಸೂರು ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮೈಸೂರು ಭಾಗದ ಒಟ್ಟು ಮೂವತ್ತು ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆದರು. ಅವರಲ್ಲಿ ಹತ್ತೊಂಬತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು, ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.


ಇದೇ ಸಂದರ್ಭದಲ್ಲಿ ಎಕ್ಸೆಲ್ ಸಾಫ್ಟ್ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ‘ಕೃತಕ ಬುದ್ಧಿಮತ್ತೆ’ (ಎಐ) ಕುರಿತು ವಿಶೇಷ ಗೋಷ್ಠಿಯನ್ನು ಆಯೋಜಿಸಿತ್ತು. ಎಐ ಉತ್ಪನ್ನಗಳು ಮತ್ತು ಸೇವೆಗಳ ವಿಭಾಗದ ಡೆವಲಪ್ ಮೆಂಟ್ ಮ್ಯಾನೇಜರ್ ಕುಮಾರಿ ಶ್ವೇತಾ ಅವರು ಈ ಗೋಷ್ಠಿ ನಡೆಸಿಕೊಟ್ಟರು.


ಈ ಕಾರ್ಯಕ್ರಮದಲ್ಲಿ ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುಧನ್ವ ಧನಂಜಯ, ನಿರ್ದೇಶಕರು ಮತ್ತು ಸಿಎಸ್‍ಆರ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಲಾಜ್ವಂತಿ ಸುಧನ್ವ, ನಿರ್ದೇಶಕರು ಮತ್ತು ಚೀಫ್ ಪೀಪಲ್ ಆಫೀಸರ್ ಆದ ಕುಮಾರಿ ಶ್ರುತಿ ಸುಧನ್ವ, ಮುಖ್ಯ ಆಡಳಿತಾಧಿಕಾರಿ ಶ್ರೀ ಶಿವಕುಮಾರ್ ಶ್ರೀಕಂಠಯ್ಯ, ಚೀಫ್ ಸ್ಟ್ರಾಟೆಜಿಕ್ ಆಫೀಸರ್ ಮತ್ತು ಇನ್ವೆಸ್ಟರ್ ರಿಲೇಷನ್ಸ್ ಹೆಡ್ ಶ್ರೀ ಪ್ರಶಾಂತ್ ಹೆಚ್.ಎಂ., ಹಾಗೂ ಸಿಎಸ್‍ಆರ್ ಮತ್ತು ಎಂಪ್ಲಾಯಿ ಎಗೇಂಜ್ ಮೆಂಟ್ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ದಿವ್ಯಾ ರಾಜಕುಮಾರ್ ಅವರು ಉಪಸ್ಥಿತರಿದ್ದರು. ಅಕ್ಷಯ ಪಾತ್ರ ಫೌಂಡೇಶನ್ ಪರವಾಗಿ ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀ ವಿನೋದ್ ಸುಧಾಕರ್ ಮತ್ತು ಡೈರೆಕ್ಟ್ ಮಾರ್ಕೆಟಿಂಗ್ ನ ರಾಷ್ಟ್ರೀಯ ಮುಖ್ಯಸ್ಥೆ ಶ್ರೀಮತಿ ಮೇರಿ ಥಾಮಸ್ ಅವರು ಭಾಗವಹಿಸಿದ್ದರು.


ವಿದ್ಯಾರ್ಥಿವೇತನದ ಬೆಂಬಲದ ಜೊತೆಗೆ, ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ಅಕ್ಷಯ ಪಾತ್ರದ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮಕ್ಕೆ ದೇಣಿಗೆ ನೀಡುವ ಮೂಲಕ ಮಕ್ಕಳ ದೈನಂದಿನ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲು ಕೊಡುಗೆಯನ್ನು ನೀಡಿತು. ಮಾರ್ಚ್ 2026ರ ತಿಂಗಳಿನಲ್ಲಿ ಮೈಸೂರು ಭಾಗಕ್ಕಾಗಿ ನೀಡಲಾದ ಈ ನೆರವಿನ ಮೂಲಕ ಸರಿಸುಮಾರು 4,193 ಮಕ್ಕಳಿಗೆ ಬಿಸಿಯಾದ, ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಒದಗಿಸಲಿದ.