
ಸಂಜೆವಾಣಿ ನ್ಯೂಸ್
ಮೈಸೂರು: ಏ.04:- ದೇಶದ 20 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ ದ ಜ್ಯುವೆಲರಿ ಶೋ ಪ್ರದರ್ಶನ ಮತ್ತು ಮಾರಾಟದ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.
ಅಮೋಘವಾದ ಭಾರತೀಯ ಒಡವೆಗಳ ಉತ್ಸವವನ್ನು ಇದೇ ಏಪ್ರಿಲ್ 03, 04, ಮತ್ತು 05, 2026 ರಂದು “ರಾಡಿಸನ್ ಬ್ಲೂ ಹೋಟಲ್”ನಲ್ಲಿ ಆಯೋಜಿಸಲಾಗಿದ್ದು, ಈ ಆಭರಣ ಮೇಳವನ್ನು ಜನಪ್ರಿಯ ನಟಿ ಅಮೃತ ಪ್ರೇಮ್” ಉದ್ಘಾಟಿಸಿದರು.
ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಮದುವೆ ಸಮಾರಂಭ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದೆ. ಭಾರತ ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ.
ಈ ಮೇಳವನ್ನು ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ್ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿದ್ದಾರೆ.
ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಟಕ್ಕೆ ಇಟ್ಟಿರುತ್ತಾರೆ. ಎಲ್ಲಾ ಚಿನ್ನದ ಆಭರಣಗಳು ಹಾಲ್ ಮಾರ್ಕ್ ಹೊಂದಿರುತ್ತದೆ, ವಜ್ರಾಭರಣಗಳು ಅಂತರರಾಷ್ಟ್ರೀಯ ಗುಣಮಟ್ಟದ ಪ್ರಮಾಣಿತ ಹೊಂದಿರುತ್ತದೆ. ಆಭರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಜ್ರಾಭರಣ ಬಗ್ಗೆ ಎಲ್ಲಾ ತರಹದ ಉಚಿತ ಮಾಹಿತಿಯನ್ನು ನೀಡುತ್ತಾರೆ. ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುವುದು. ಮೈಸೂರಿನ ಸುತ್ತ ಮುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬರುವಂತಹ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಆಭರಣ ಖರೀದಿಸಲು ಒಂದೇ ವೇದಿಕೆಯಲ್ಲಿ ಭಾರತದ 20 ಹೆಸರಾಂತ ಆಭರಣ ಮಳಿಗೆಗಳು ಕಣ್ಣುಗಳಿಗೆ ರಸದೌತಣ ನೀಡಲಿವೆ.
ಬೆಂಗಳೂರಿನ ಗಜರಾಜ್, ಸಿಂಹ ಜ್ಯುವೆಲರ್ಸ್, ಪಂಚಕೇಸರಿ ಬಡೇರಾ, ಶ್ರೀ ಗಣೇಶ್ ಡೈಮೆಂಡ್ಸ್, ಆಭೂಷಣ್, ಲವೇರಾ, ಮೇಪ್ತಾ ಜ್ಯುವೆಲರಿ(ಚೆನೈ) ಸಪ್ತಷಿ, ಟ್ರೈ ಡೈಯಾ, ರೂಪಂ ಸಿಲ್ವರ್, ಯಿಮ್ಮಡಿ ಸಿಲ್ವರ್, ಸ್ಟೈಲ್ ಓರಾ, ಮದನ್ ಜೆಮ್ಸ್ ಭಾಗವಹಿಸುತ್ತಿರುವ ಆಭರಣ ಮಳಿಗೆಗಳು. ಮೈಸೂರಿನಿಂದ ಡಾರ್ಲ ಗೋಲ್ಡ್, ರಾಜ್ ಡೈಮೆಂಡ್ಸ್, ಪ್ರಕಾಶ್ ಜ್ಯುವೆಲರ್, ಜ್ಯುವೆಲ್ ಮಂದಿರ್, ಓರಾ ಬೈ ನೀಲಕಂಠ, ವಲ್ರ್ಡ ಆಫ್ ಸಿಲ್ವರ್, ಭಾಗವಹಿಸುತ್ತಿರುವ ಆಭರಣ ಮಳಿಗೆಗಳು. ಗ್ರಾಹಕರ ಅಭಿರುಚಿ ಮತ್ತು ಬಜೆಟ್ಗನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಮೈಸೂರಿನ ಜನತೆಗೆ ದೊರೆಯಲಿವೆ.
ಕಾರ್ಯಕ್ರಮದಲ್ಲಿ ಶ್ರೀಮತಿ ಪಲ್ಲವಿ ಸಿ.ಟಿ. ರವಿ, ಸಾಮಾಜಿಕ ಉದ್ಯಮಿ ಡಾ.ಹೇಮಮಾಲಿನಿ ಲಕ್ಷ್ಮಣ್, ಮಾಜಿ ಮಿಸೆಸ್ ಇಂಡಿಯಾ ಯೂನಿವರ್ಸ್ ಕ್ವೀನ್, ಶ್ರೀಮತಿ ಚೈತ್ರಾ ರಂಗಸ್ವಾಮಿ, ಹೆಸರಾಂತ ವಾಸ್ತುಶಿಲ್ಪಿ, ಶ್ರೀಮತಿ ಪ್ರಿಯಾ ತಂತ್ರಿ ವ್ಯಾಪಾರ ಉದ್ಯಮಿ, ಶ್ರೀಮತಿ ನಮ್ರತಾ ಅರುಣ್ ವ್ಯವಹಾರ ಉದ್ಯಮಿ ಉಪಸ್ಥಿತರಿದ್ದರು.

























